ಬೋಧನೆಗಳು

  • ಜೀವಿಗಳನ್ನು ಸಂತೋಷಗೊಳಿಸುವದೇ ದೇವಪೂಜೆ.
  • ನೀತಿ ಪಾಲನೆಯಿಂದ ಸಾಮಾಜಿಕ ಶಾಂತಿ.
  • ವಿಷಯಗಳ ಮೋಹ ಬಿಡುವದರಿಂದ ಮಾನಸಿಕ ಶಾಂತಿ.
  • ಜ್ಞಾನ ಸಮಾಧಿಯನ್ನು ಹೊಂದದೆ ಮುಕ್ತಿ ಇಲ್ಲ.
  • ಕರ್ಮ ಮತ್ತು ವಿಷಯವಾಸನೆಗಳಿಗೆ ಅನುಸಾರವಾಗಿ ಪುನರ್ಜನ್ಮ ತಪ್ಪಿದ್ದಲ್ಲ.
  • ಮನಸ್ಸು ಚಂಚಲವಾದರೆ ದುಃಖ, ಮನಸ್ಸು ನಿಶ್ಚಲವಾದರೆ ಸುಖ.
  • ದೇಹಭಾವ ದುಃಖಮಯ, ವಿಷಯಾಸಕ್ತಿ ದುಃಖಮಯ, ಸಚ್ಚಿದಾನಂದಭಾವ ಸುಖಮಯ.
  • ಮಾನವನು ತನ್ನ ದೈವದ ಶಿಲ್ಪಿ ತಾನೇ.
  • ಮಾನವ ಜನ್ಮವು ಮುಕ್ತಿಗೆ ಸಾಧನವು.
  • ಸುಖ- ದುಃಖದ ನಿರಂತರ ವಿಚಾರದಿಂದ ಮನೋನಿಗ್ರಹ.
  • ತನ್ನ ನಿಜಸ್ವರೂಪದ ನಿರಂತರ ನೆನಪಿನಿಂದ ಆತ್ಮಜ್ಞಾನ.
  • ತನ್ನ ಅರಿವೇ ತನ್ನ ಗುರು.
  • ಮಾನವನು ಸುಖವನ್ನು ಜಗತ್ತಿನಲ್ಲಿ ಹುಡುಕುವದರ ಮೂಲಕ ಅತಿ ಹೀನ ಅಪರಾಧವನ್ನು ಎಸಗಿದ್ದಾನೆ.
  • ವಿಷಯೇಂದ್ರಿಯ ಸಂಪರ್ಕ ಭೋಗವು ದಣಿವು ಮತ್ತು ಬೇಸರಿಕೆಯಲ್ಲಿ ಕೊನೆಗೊಳ್ಳುವದು.
  • ಸುಖವು ರೂಪರಹಿತವಿದೆ. ಗಾಢವಾದ ನಿದ್ರೆಯಲ್ಲಿ ರೂಪಗಳಿಲ್ಲ, ಸುಖವು ಇದೆ. ಅದು ಆತ್ಮನ ಸುಖವು.
  • ತಾನು ದೇವರಲ್ಲ ಎನ್ನುವದೇ ಮಹಾಪರಾಧ.
  • ಆತ್ಮನ ಧರ್ಮ ಸ್ವಧರ್ಮ. ಅನಾತ್ಮ ಧರ್ಮ ಪರಧರ್ಮ.
  • ದೇಹಭಾವವನ್ನು ಅಳಿ, ದೇವ ತಾನೆಂಬುದನ್ನು ತಿಳಿ, ತಿಳಿದು ಉಳಿ.
  • ಸುಖವು ಸ್ವರೂಪದೊಳಗೆ ಇದೆ, ಹೊರಗೆ ವಿಷಯ ವಸ್ತುಗಳಲ್ಲಿ ಇಲ್ಲ.
  • ತನ್ನ ಸ್ವರೂಪಾವಸ್ಥಿತಿಯನ್ನು ಹೊಂದಲು ಶೋತ್ರಿಯತ್ವ ಅವಶ್ಯವಿಲ್ಲ.
  • ಕರ್ಮ ನಿಯಮಕ್ಕನುಸಾರವಾಗಿ ಜಗತ್ತಿನ ಘಟನೆಗಳು ನಡೆಯುತ್ತವೆ.
  • ಶಾಶ್ವತ ಸುಖವನ್ನು ಹೊಂದುವದೇ ಮಾನವನ ಜನ್ಮಸಿದ್ಧ ಹಕ್ಕು.
  • ಸ್ವರೂಪ ಜ್ಞಾನವನ್ನು ಮಾಡಿಕೊಳ್ಳಲು ಜ್ಞಾನಸಮಾಧಿಯನ್ನು ಹೊಂದುವದು ಅತಿ ಅವಶ್ಯವು.
  • ಮಾನವನು ತನ್ನ ಪ್ರಥಮಾನುಭೂತಿಯ ಸುಖದ ಅನುಭವವನ್ನು ಅವಲಂಬಿಸಿ ಸುಖವನ್ನು ಬಯಸುತ್ತಾನೆ.
  • ವಿಶ್ವವು ಜಡ ಮತ್ತು ದುಃಖರೂಪವಿದೆ.
  • ವಿಶ್ವವು ಮನಸ್ಸಿನ ಕಲ್ಪನೆ, ಅದಕ್ಕೆ ಅಸ್ತಿತ್ವವೇ ಇಲ್ಲ.
  • ನೀನು ಆನಂದಸ್ವರೂಪನೇ ಇದ್ದಿ, ಆದರೆ ಅದನ್ನು ಮರೆತಿರುವಿ.
  • ವ್ಯವಹಾರಿಕ ಜಾಗ್ರ, ಕನಸು ಮತ್ತು ಗಾಢನಿದ್ರೆ ಇವುಗಳಿಂದ ನಿನ್ನ ನಿಜ ಸ್ವರೂಪವು ಬಾಧೆ ಹೊಂದುವದಿಲ್ಲ.
  • ಮೂರೂ ಅವಸ್ಥೆಗಳು ಸ್ವರೂಪದ ಆಧಾರದ ಮೇಲೆ ತೋರಿದ ತೋರಿಕೆಗಳು (ಅಜ್ಞಾನದಿಂದ ಸೃಷ್ಟಿಸಲ್ಪಟ್ಟವು), ಅವುಗಳಿಗೆ ನಿಜವಾದ ಅಸ್ತಿತ್ವವೇ ಇಲ್ಲ.
  • ಬರೇ ವೇಷದ ಬದಲಾವಣೆ ಅಥವಾ ಅವೈವಾಹಿಕ ಜೀವನವನ್ನು ಸಾಗಿಸುವದು ಸ್ವರೂಪಾವಸ್ಥಿತಿಯನ್ನು ಹೊಂದಲು ಸಾಧಕವಾಗುವದಿಲ್ಲ.
  • ಪ್ರಾಥರ್ಿಸುವದರಿಂದಾಗಲಿ, ಬೇಡುವದರಿಂದಾಗಲಿ, ಕೇಳುವದರಿಂದಾಗಲಿ ಅಥವಾ ಹುಡುಕುವದರಿಂದಾಗಲಿ ಸುಖವು ದೊರೆಯಲಾರದು.
  • ಸುಖವೇ ಗುರಿ, ಸುಖದ ಭಾವವೇ ಸಾಧನೆ.
  • ಸ್ವರೂಪದ ಅಜ್ಞಾನದಿಂದ ದುಃಖವು ಬಂದಿರುವದು. ಸ್ವರೂಪದ ಜ್ಞಾನದಿಂದ ಸುಖವು ಪ್ರಾಪ್ತಿಯಾಗುವದು.
  • ಸುಖಕ್ಕೇ ನಮಸ್ಕಾರ.
  • ನನ್ನ ನಿಜ ಸ್ವರೂಪಕ್ಕೇ ನಮಸ್ಕಾರ.
  • ರಾಗದ ವಿಷಯ ಪ್ರಾಪ್ತಿಯಾದಾಗ ಮನಸ್ಸು ಕ್ಷಣಮಾತ್ರ ನಿಶ್ಚಲವಾಗಿ ಸ್ವರೂಪದ ಆನಂದವೇ ಆ ನಿಶ್ಚಲ ಮನಸ್ಸಿನಲ್ಲಿ ಪ್ರತಿಫಲನವಾಗುವದು. ಆದರೆ ಮಾನವನು ವಿಷಯವಸ್ತುಗಳೇ ಸುಖ ಕೊಡುವವು ಎಂದು ತಪ್ಪು ತಿಳಿದುಕೊಳ್ಳುತ್ತಾನೆ.
  • ಸುಖದ ಗುರುತಿಲ್ಲದೆ ಸುಖವನ್ನು ಬೇಡಲಾರೆವು.
  • ಮಾನವನಿಗೆ ಸುಖದ ಗುರುತು ಅವನ ಪ್ರಥಮಾನುಭೂತಿಯಿಂದಲೇ ಇದೆ. ಆದರೆ ಹೇಗೋ ಮರೆತಂತಾಗಿದೆ.
  • ಗಾಢನಿದ್ರೆಯು ಅಜ್ಞಾನ ಮತ್ತು ಆನಂದದ ಸ್ಥಿತಿಯು, ತುರ್ಯವು ಜ್ಞಾನ ಮತ್ತು ಆನಂದದ ಸ್ಥಿತಿಯು. ತುರ್ಯದಲ್ಲಿ ಅರುವಿನ ಆನಂದವಿದೆ, ಆದರೆ ಗಾಢನಿದ್ರೆಯಲ್ಲಿ ಅಜ್ಞಾನದ ಆನಂದವಿದೆ.
  • ತುರ್ಯದಲ್ಲಿ ಜೀವನಿಗೆ ತನ್ನ ಸ್ವರೂಪದ ಬಗ್ಗೆ ಸುನಿಶ್ಚಿತವಾದ ತಿಳುವಳಿಕೆ ಇದೆ, ಆದರೆ ಗಾಢನಿದ್ರೆಯಲ್ಲಿ ತನ್ನ ಸ್ವರೂಪದ ತಿಳುವಳಿಕೆ ಇಲ್ಲ.
  • ತುಯರ್ಾವಸ್ಥೆಯಲ್ಲಿ ತಾನು ಗಾಢನಿದ್ರೆ, ಕನಸು ಮತ್ತು ವ್ಯವಹಾರಿಕ ಜಾಗ್ರಾವಸ್ಥೆ ಇವುಗಳಿಗೆ ಸಾಕ್ಷಿಯಾಗಿರುವನು.
  • ತಾನು ಬದುಕುವದು ಇನ್ನುಳಿದ ಜೀವಿಗಳಿಗೆ ಬದುಕಗೊಡುವದು, ಇದೇ ನೀತಿಯು.
  • ಆಶಾರಹಿತ ಸ್ಥಿತಿಯೇ ಸುಖ.
  • ಕಲಿತದ್ದನ್ನೆಲ್ಲ ಮರೆ.
  • ಸ್ವರೂಪವನ್ನು ತಿಳಿಯುವದೆಂದರೆ ಸ್ವರೂಪವೇ ಇರುವದು, ಆಗುವದಲ್ಲ.
  • ನಮ್ಮ ಸ್ವರೂಪವೇ ಸುಖಮಯವಿದೆ. ಆದರೆ ಅಜ್ಞಾನಿ ಜೀವರು ಸುಖವನ್ನು ತಮ್ಮ ಸ್ವರೂಪದ ಹೊರಗೆ ಹಡುಕುತ್ತಾರೆ.
  • ಸುಖ ದುಃಖಗಳು ಮನಸ್ಸಿಗೆ, ಜಡದೇಹ ಮತ್ತು ಆತ್ಮನಿಗೆ ಅಲ್ಲ.
  • ಪ್ರಾಣಾಯಾಮದಿಂದ ಮನಸ್ಸು ತಾತ್ಪೂತರ್ಿಕವಾಗಿ ನಿಶ್ಚಲವಾಗಿ ಸುಖವು ಅನುಭವಕ್ಕೆ ಬರುವದು. ಆದರೆ ಪ್ರಾಣಾಯಾಮವನ್ನು ತೆಗೆದು ಹಾಕಿದಾಗ ಮತ್ತೆ ಮನಸ್ಸು ಚಂಚಲವಾಗಿ ದುಃಖವುಂಟಾಗುವದು. ಆದ್ದರಿಂದ ಪ್ರಾಣಾಯಾಮದ ಸಾಧನೆಯಿಂದ ಶಾಶ್ವತ ಸುಖವನ್ನು ಹೊಂದುವದು ಸಾಧ್ಯವಿಲ್ಲ.
  • ಸುಖವನ್ನು ಯಾವುದೇ ಪ್ರಯೋಗಾಲಯದಲ್ಲಿ ತಯಾರಿಸುವದು ಸಾಧ್ಯವಿಲ್ಲ.
  • ವಿವೇಕ, ವೈರಾಗ್ಯ ಮತ್ತು ಸತತ ಆತ್ಮಧ್ಯಾನದಿಂದ ಮಾತ್ರ ಸ್ವರೂಪ ಸಾಕ್ಷಾತ್ಕಾರ ಸಾಧ್ಯ.