ಶ್ರೀ ಗುರುದೇವ ಆತ್ಮಾನಂದರು

ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಪಾಕನಾಕರೆಡ್ಡಿ ಪಾಟೀಲ ಕುಟುಂಬದಲ್ಲಿ 1904ರಲ್ಲಿ ಪರಮ ತಪಸ್ವಿಗಳೂ ಅವತಾರ ಪುರುಷರೂ ಆದ ಪೂಜ್ಯ ಶ್ರೀ ಸದ್ಗುರು ಶಿವಾನಂದರ(ನಾಗನೂರ-ಗದಗ) ಏಕಮೇವ ಮಾನಸ ಮತ್ತು ಔರಸ ಪುತ್ರರಾಗಿ ಜನಿಸಿದರು. ಅವರು ಐದು ವರ್ಷದ ಬಾಲಕರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡರು. ಸ್ವಾಮಿ ಶಿವಾನಂದರು ತಮ್ಮ ಪ್ರಥಮಾನುಭೂತಿಯನ್ನು ನೆನಪಿಸಿಕೊಂಡು ಸಚ್ಚಿದಾನಂದಮಯವಾದ ತಮ್ಮ ಸ್ವರೂಪ ಸಾಕ್ಷಾತ್ಕಾರ ಹೊಂದಿದರು. ಪೂಜ್ಯ ಶ್ರೀ ಸದ್ಗುರು ಶಿವಾನಂದರು ಅಧ್ಯಾತ್ಮ ಬೋಧನೆಗಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟರು. ಬಾಲ್ಯದಿಂದಲೇ ಪೂಜ್ಯ ಶ್ರೀ ಗುರುದೇವ ಆತ್ಮಾನಂದರಿಗೆ ಅಧ್ಯತ್ಮ ವಿಚಾರದ ಕಡೆಗೆ ಒಲವು ಇತ್ತು. ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ತಮ್ಮ ತಂದೆಯವರ ವಿಶೇಷ ಪೋಷಣೆಯಲ್ಲಿಯೇ ಬೆಳೆದರು. ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪೂಜ್ಯ ಶ್ರೀ ಗುರುದೇವ ಶಿವಾನಂದರು ತೂರ್ಯಸ್ಥಿತಿಯನ್ನು ಹೊಂದುತ್ತಿದ್ದರು. ಅದು ಎರಡು ಮೂರು ದಿನಗಳವರೆಗೆ ಇರುತ್ತಿತ್ತು. ಆಗ ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ಪೂಜ್ಯ ಶ್ರೀ ಗುರುದೇವ ಶಿವಾನಂದರ ತೂರ್ಯಸ್ಥಿತಿಯನ್ನು ಲಕ್ಷ್ಯ ಪೂರ್ವಕವಾಗಿ ನೀರೀಕ್ಷಿಸಿ ಅದರ ಗೂಡಾರ್ಥವನ್ನು ತಿಳಿದುಕೊಂಡರು. ಶಾಲಾಭ್ಯಸದ ಕಡೆಗೆ ಹೆಚ್ಚಿನ ಒಲವು ಇರಲಿಲ್ಲ. ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಸಮೀಪದ ಗೊನ್ನಾಗರ ಗ್ರಾಮದ ಅವರ ಹೊಲದಲ್ಲಿ ಧ್ಯಾನಮಗ್ನರಾಗುತ್ತಿದ್ದರು. ಅವರು ತಮ್ಮ ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ಮತ್ತು ನವಲಗುಂದ ತಾಲೂಕಿನ ನಾಗನೂರ ಗ್ರಾಮದಲ್ಲಿ ಪೂರೈಸಿದರು. ನಂತರ ಅವರು ತಮ್ಮ ಪ್ರೌಢ ಶಾಲೆಯ ಶಿಕ್ಷಣವನ್ನು ಧಾರವಾಡದ ಬಾಸೆಲ್ ಮಿಶನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ಅವರು ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಪಾಸಾದರು. ನಂತರ ಅವರು ಕಾಲೇಜಿನ ಮೊದಲನೆ ವರ್ಷದ ಕಲಾ ವಿಭಾಗದ ಶಿಕ್ಷಣವನ್ನು ಮತ್ತು ಬಿ. ಎ ಪ್ರಥಮ ವರ್ಷದ ಶಿಕ್ಷಣವನ್ನು ಧಾರವಾಡದ ಕನರ್ಾಟಕ ಕಾಲೇಜದಿಂದ ಮುಗಿಸಿದರು. ಅವರು ತಮ್ಮ ಬಿ. ಎ. ಪರೀಕ್ಷೆಯನ್ನು ಇಂಗ್ಲೀಷ, ಸಂಸ್ಕೃತ ಮತ್ತು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಎಂಬ ವಿಷಯಗಳನ್ನು ಆಯ್ದುಕೊಂಡು 1930ರಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಪಾಸಾದರು. ನಂತರ 1932ರಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಎಂಬ ವಿಷಯವನ್ನು ಆಯ್ದುಕೊಂಡು ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಎಂ. ಎ. ಪರೀಕ್ಷೆಯನ್ನು ಪಾಸಾದರು. ನಂತರ ತಮ್ಮ ತಂದೆಯವರ ವಿಶೇಷ ಮಾರ್ಗದರ್ಶನದಿಂದ ಮತ್ತು ಹಿಂದಿನ ಜನ್ಮಗಳ ಆತ್ಮಾಭ್ಯಾಸದ ತೀವ್ರ ಸಂಸ್ಕಾರದಿಂದ ತೂರ್ಯ ಸ್ಥಿತಿಯನ್ನು ಹೊಂದಿಯೇ ತೀರಬೇಕೆಂದು ನಿಶ್ಚಯಿಸಿದರು. ಎಲ್ಲ ಅಧಿಕಾರ, ಸಂಪತ್ತು, ಐಷಾರಾಮದ ಜೀವನ ಮತ್ತು ಲೋಕಪ್ರಸಿದ್ದಿಯನ್ನು ನಿರ್ಲಕ್ಷಿಸಿದರು. ಅವರು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ತೀರ್ಥಗುಡಿ ಎಂಬ ಗ್ರಾಮದಲ್ಲಿ ಸ್ವರೂಪದ ಸ್ಥಿತಿಯನ್ನು ಹೊಂದುವ ಸತತ ಅಭ್ಯಾಸದಲ್ಲಿ ತೊಡಗಿ ಅಲ್ಪ ಕಾಲದಲ್ಲಿಯೇ ಆತ್ಮಜ್ಞಾನಿಗಳಾದರು. ಅವರು ಪ್ರಾರಬ್ದಕ್ಕನುಸಾರವಾಗಿ 1936ರಲ್ಲಿ ದೇವಕಿ ಎಂಬ ನೀತಿ ಸಂಪನ್ನಳಾದ ಕನ್ಯೆಯನ್ನು ಮದುವೆಯಾದರು. ದೇವಕಿಯವರು ತಮ್ಮ ಪತಿಯವರಿಗೆ ಅವರಿಚ್ಛೆಯಂತೆ ಎಲ್ಲ ರೀತಿಯಿಂದಲೂ ಸಹಕರಿಸಿದರು. ಅವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದರು. ಅವರ ಎರಡನೆಯ ಮಗನು ಕಾಲೇಜು ವಿದ್ಯಾಥರ್ಿಯಾಗಿದ್ದಾಗ ವಿಷಮ ಜ್ವರದ ಬಾಧೆಯಿಂದ ದೇಹಬಿಟ್ಟನು. ಈಗ ಅವರ ಇಬ್ಬರು ಹೆಣ್ಣು ಮಕ್ಕಳು ನೀತಿ ನಿಷ್ಠೆಯಿಂದ ತಮ್ಮ ಗೃಹಸ್ಥ ಜೀವನ ಸಾಗಿಸುತ್ತಿದ್ದಾರೆ. ಅವರ ಹಿರಿಯ ಪುತ್ರರಾದ ಪೂಜ್ಯ ಶ್ರೀ ನಿರಂಜನ ಸ್ವಾಮಿಗಳು ತಮ್ಮ ತಂದೆಯವರಂತೆ ಅಧ್ಯಾತ್ಮ ಸಾಧನೆ ಮತ್ತು ಪ್ರಚಾರವನ್ನು ಮುಂದುವರಿಸುತ್ತಿದ್ದಾರೆ. ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ಲೋಕ ಕಲ್ಯಾಣಾರ್ಥವಾಗಿ ಅವರಿವರೆನ್ನದೆ ಭುವನದ ಮಾನವರೆಲ್ಲರಿಗೂ ವೇದಾಂತ ತತ್ವಜ್ಞಾನವನ್ನು 45 ವರ್ಷಗಳವರೆಗೆ ಬೋಧಿಸಿದರು.

ಅವರ ಮುಖ್ಯ ಬೋಧನೆಗಳು ಈ ಕೆಳಗಿನಂತಿವೆ:
ಮಾನವನು ತನ್ನ ಪ್ರಥಮಾನುಭೂತಿಯ ಆನಂದದ ಅನುಭವದ ಆಧಾರದ ಮೇಲೆಯೇ ಸುಖವನ್ನು ಬಯಸುತ್ತಾನೆ. ಆತ್ಮಜ್ಞಾನವನ್ನು ಪಡೆಯಲು ಶೃತಿಯ ಅಭ್ಯಾಸವು ಅವಶ್ಯವಿಲ್ಲ. ವಿಶ್ವವು ಮನಸ್ಸಿನ ಸೃಷ್ಟಿಯು, ಅದು ಮಿಥ್ಯೆಯಾಗಿದೆ. ವಿಶ್ವವು ಜಡವಿದೆ ಮತ್ತು ದಃಖರೂಪಿಯಾಗಿದೆ. ಆದ್ದರಿಂದ, ವಿಶ್ವದ ಬಗೆಗಿನ ಎಲ್ಲ ಜ್ಞಾನವೂ ನಿಷ್ಪ್ರಯೋಜಕ. ನೀವು ಆನಂದ ಸ್ವರೂಪರೇ ಇದ್ದೀರಿ. ಆದರೆ ಆ ನಿಮ್ಮ ಆನಂದ ಸ್ವರೂಪವನ್ನು ಹೇಗೋ ಮರೆತಿರುವಿರಿ. ನಿಮ್ಮ ನಿಜ ಸ್ವ್ಡರೂಪವು ವ್ಯಾವಹಾರಿಕ ಜಾಗ್ರ, ಕನಸು ಮತ್ತು ಗಾಢ ನಿದ್ರೆ ಮುಂತಾದ ಅವಸ್ಥೆಗಳಿಂದ ಬಾಧವಾಗಿಲ್ಲ. ಈ ಮೂರೂ ಅವಸ್ಥೆಗಳು(ಅಜ್ಞಾನದ ಸೃಷ್ಟಿಗಳು) ನಿಮ್ಮ ಸ್ವರೂಪದ ಆಧಾರದ ಮೇಲೆ ತೋರಿದ ತೋರಿಕೆಗಳು. ಅವುಗಳಿಗೆ ನಿಜವಾದ ಅಸ್ತಿತ್ವವೇ ಇಲ್ಲ. ನೀವು ನಿಮ್ಮ ಆನಂದಮಯವಾದ ನಿಜಸ್ವರೂಪನ್ನು ನೆನಪಿಸಿಕೊಂಡು ಅದರಲ್ಲಿ ನೆಲೆಯಾಗಿ ಉಳಿಯಬಹುದು. ಸ್ವರೂಪಜ್ಞಾನವನ್ನು ಪಡೆಯಬೇಕಾದರೆ ಜ್ಞಾನ ಸಮಾಧಿಯನ್ನು ಹೊಂದುವದು ಅತಿ ಅವಶ್ಯವು. ಇಂದ್ರಿಯಗಳನ್ನು ಗೆದ್ದು ನಿದ್ರೆಯನ್ನು ಮೀರಿದಾಗ ಜ್ಞಾನ ಸಮಾಧಿಯನ್ನು ಹೊಂದಲು ಸಾಧ್ಯವಾಗುವದು. ಮಾನವನು ತನ್ನ ದೈವದ ಶಿಲ್ಪಿ ತಾನೇ. ತನ್ನ ಅರಿವೇ ತನ್ನ ಗುರು. ಆದರೆ ಕೇವಲ ದೇಹದ ಬಟ್ಟೆಗಳನ್ನು ಬದಲಾಯಿಸಿದರೆ ಅಥವಾ ವೈವಾಹಿಕ ಜೀವನವನ್ನು ನಡೆಸದೆ ಇದ್ದರೆ ಸ್ಡರೂಪ ಜ್ಞಾನವನ್ನು ಹೊಂದುವದು ಸಾಧ್ಯವಾಗಲಾರದು. ಆದ್ದರಿಂದ ನಮ್ಮ ನಿಜ ಸ್ವರೂಪವನ್ನು ನೆನಪಿಸಿಕೊಂಡು ಸ್ವರೂಪಾಗಿ ಉಳಿಯುವದೇ ಏಕೈಕ ಸಾಧನಕ್ರಮವು. ನೀತಿ ಪಾಲನೆಯಿಂದ ಸಾಮಾಜಿಕ ಶಾಂತಿ. ವಿಷಯಗಳ ಮೋಹವನ್ನು ಬಿಡುವದರಿಂದ ಮಾನಸಿಕ ಶಾಂತಿ. ಆತ್ಮಜ್ಞಾನದಿಂದ ಶಾಶ್ವತ ಶಾಂತಿ.

ಪೂಜ್ಯ ಶ್ರೀ ಸದ್ಗುರು ಶಿವಾನಂದರು ಮತ್ತು ಅವರ ಸುಪುತ್ರರಾದ ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ಪ್ರಾಚೀನ ಭಾರತೀಯ ಋಷಿಗಳಾದ ವ್ಯಾಸ ಶುಕದೇವರಂತೆ ಇದ್ದರು. ಅವರು ಅಧ್ಯಾತ್ಮ ಪ್ರವಚನ ಗೈಯುವಾಗ ತೂಯರ್ಾವಸ್ಥೆಯನ್ನು ಹೊಂದುತ್ತಿದ್ದರು.
ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ತಾವು ಹೊಂದಿದ ಶಾಶ್ವತ ಸುಖದ ಬಗ್ಗೆ ಅವರಿವರೆನ್ನದೆ ಭುವನದ ಮಾನವರೆಲ್ಲರಿಗೂ ಮೇಲು-ಕೀಳು, ಸಾಕ್ಷರ-ನಿರಕ್ಷರ, ಶ್ರೀಮಂತ-ಬಡವ ಎಂಬ ಭೇದ ಮಾಡದೆ ಲೋಕಕಲ್ಯಾಣಾರ್ಥವಾಗಿ 45 ವರ್ಷಗಳ ವರೆಗೆ ಬೋಧ ಮಾಡಿದರು.
ಅವರು ಸ್ವಲ್ಪ ಕಾಲದವರೆಗೆ ರಾಮದುರ್ಗ ಸಂಸ್ಥಾನದ ಹೈಸ್ಕೂಲಿನಲ್ಲಿ ಮತ್ತು ವಿಜಾಪುರದ ಶ್ರೀ ಸಿದ್ದೇಶ್ವರ ಹೈಸ್ಕೂಲಿನಲ್ಲಿ ಇಂಗ್ಲೀಷ ಶಿಕ್ಷಕರಾಗಿ ಕೆಲಸ ಮಾಡಿದರು.
ಅದರಂತೆ ಅವರು ಕೆಲವು ಕಾಲ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಪೋಲಿಸ ಮತ್ತು ಮುಲ್ಕಿ ಪಾಟೀಲರಾಗಿ ಸೇವೆ ಸಲ್ಲಿಸಿದರು. ಅವರು ವೇದಾಂತ ತತ್ವಜ್ಞಾನವನ್ನು ಅತಿ ಸರಳವಾದ ಕನ್ನಡ ಮತ್ತು ಇಂಗ್ಲೀಷ ಭಾಷೆಗಳಲ್ಲಿ ಬೋಧಿಸಿದರು. ಯಾವುದೇ ಸಾಮಾನ್ಯ ಮಾನವನೂ ಕೂಡ ಅವರ ಪ್ರವಚನಗಳನ್ನು ತಿಳಿದುಕೊಳ್ಳಬಹುದಾಗಿತ್ತು. ಅವರು ಬೋಧಿಸಿದ ತತ್ವಗಳು ಸಾರ್ವತ್ರಿಕ ಮತ್ತು ಶಾಶ್ವತವಾಗಿವೆ.
ಅವರು ಅತಿ ಸರಳವಾದ ಸಾದಾ ಜೀವನವನ್ನು ಸಾಗಿಸಿದರು. ಅವರು ಒಂದು ಜೋಡಿ ಬಿಳಿಯ ಹತ್ತಿಯ ಅಂಗಿಗಳನ್ನು, ಒಂದು ಜೋಡಿ ಬಿಳಿಯ ಹತ್ತಿಯ ಧೋತರಗಳನ್ನು ಮತ್ತು ತಲೆಯ ಮೇಲೆ ಒಂದು ಬಿಳಿಯ ಹತ್ತಿಯ ಟವೆಲ್ನ್ನು ಮಾತ್ರ ಧರಿಸುತ್ತಿದ್ದರು. ಅವರು ದಿನಕ್ಕೊಂದು ಸಲ ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡುತ್ತಿದ್ದರು. ರಾತ್ರಿ 9.30 ಗಂಟೆಗೆ ಸ್ವಲ್ಪ ಹಾಲು ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದರು.
ಅವರು ಜನರನ್ನು ದೇವರೆಂದು ಮತ್ತು ತಮ್ಮನ್ನು ಪೂಜಾರಿ ಎಂದು, ಜನರನ್ನು ತಮ್ಮ ಗುರುಗಳೆಂದು ಮತ್ತು ತಮ್ಮನ್ನು ಅವರ ಶಿಷ್ಯರೆಂದು ತಮ್ಮ ಬೋಧನೆಯ ಕಾಲಕ್ಕೆ ಕರೆದುಕೊಳ್ಳುತ್ತಿದ್ದರು. ಇಷ್ಟು ನಿರಭಿಮಾನದ ಜೀವನ ಅವರದು.
ಅವರ ದಿನಚರ್ಯವು ಈ ಕೆಳಗಿನಂತೆ ಇತ್ತು.
ಅವರು ಬ್ರಾಹ್ಮೀ ಮುಹೂರ್ತದಲ್ಲಿ 4.00 ಗಂಟೆಗೆ ಏಳುತ್ತಿದ್ದರು. ತಮ್ಮ ದೈನಂದಿನ ನೈಸಗರ್ಿಕ ಕ್ರಿಯೆಗಳನ್ನು ಮುಗಿಸಿಕೊಂಡು ವಾಯುವಿಹಾರಕ್ಕೆ ಹೋಗುತ್ತಿದ್ದರು. ನಂತರ 5.30ಕ್ಕೆ ಮರಳಿ 7.30ರ ವರೆಗೆ ಸಾರ್ವತ್ರಿಕ ಶಾಶ್ವತ ತತ್ವಗಳನ್ನು ಬೋಧಿಸುತ್ತಿದ್ದರು. ನಂತರ ಸ್ನಾನ ಮಾಡಿ 8 ಗಂಟೆಯಿಂದ 11 ಗಂಟೆಯವರೆಗೆ ಸ್ವರೂಪದ ಅನುಷ್ಠಾನದಲ್ಲಿ ನಿರತರಾಗುತ್ತಿದ್ದರು. ಮಧ್ಯಾಹ್ನ 12 ಗಂಟೆಯ ನಂತರ ದರ್ಶನಾಥರ್ಿಗಳೊಂದಿಗೆ ತಾತ್ವಿಕ ವಿಚಾರದ ಕುರಿತು ಚಚರ್ಿಸುತ್ತಿದ್ದರು ಮತ್ತು ಭೂತಬಾಧೆ ಹೊಂದಿದವರ ತಾಪತ್ರಯ ನಿವಾರಿಸುತ್ತಿದ್ದರು. ಮಧ್ಯಾಹ್ನ 1 ಗಂಟೆಗೆ ಊಟ ಮಾಡುತ್ತಿದ್ದರು. ಅವರ ಊಟ "ಹಿತ ಭುಕ್, ಮಿತ ಭುಕ್, ಋತು ಭುಕ್" ಎಂಬ ಆರೋಗ್ಯ ನಿಯಮದಂತೆ ಸತ್ವ ಶುದ್ಧ ಸಾದಾ ಆಹಾರವಾಗಿದ್ದಿತು. ನೈಸಗರ್ಿಕವಾಗಿಯೇ ಬೆಳೆದ ಆಹಾರ ಸೇವನೆ ಅವರ ವಿಶೇಷತೆಯಾಗಿದ್ದಿತು. ಸಾಮಾನ್ಯವಾಗಿ ಗೋದಿ, ಜೋಳ, ಹಸಿರು ತರಕಾರಿ, ಹಣ್ಣು, ಹಾಲು, ತುಪ್ಪಗಳನ್ನು ನಿತ್ಯವು ಸೇವಿಸುವ ರೂಡಿಯಿದ್ದಿತು. ಕೃತ್ರಿಮವಾಗಿ ಸಂಸ್ಕರಿಸಿದ ಆಹಾರ ಸೇವನೆ ವಜ್ರ್ಯವಾಗಿದ್ದಿತು. ಮಧ್ಯಾಹ್ನ 2 ಗಂಟೆಯಿಂದ 3.30 ಗಂಟೆಯವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ನಂತರ 3.30 ರಿಂದ 5.30ರ ವರೆಗೆ ಭಕ್ತರಿಗೆ ಆತ್ಮ ವಿಚಾರಗಳನ್ನು ತಿಳಿಸುತ್ತಿದ್ದರು. 5.30ರಿಂದ ಪುನಃ ಸಾಯಂಕಾಲದ ವಾಯುವಿಹಾರಕ್ಕೆ ಹೋಗುತ್ತಿದ್ದರು. ಮುಸ್ಸಂಜೆಯ 7.00 ಗಂಟೆಯಿಂದ 9.00 ಗಂಟೆಯವರೆಗೆ ಅಧ್ಯಾತ್ಮ ಪ್ರವಚನ ನೀಡುತ್ತಿದ್ದರು. ರಾತ್ರಿ 9.00 ರಿಂದ 9.30ರವರೆಗೆ ಭಕ್ತರ ಸುಖ ದುಃಖ ವಿಚಾರಿಸಿ ಏನಾದರೂ ಪೀಡೆಗಳಿದ್ದರೆ ನಿವಾರಿಸುತ್ತಿದ್ದರು. ನಂತರ ಸ್ವಲ್ಪ ಹಾಲು ಮತ್ತು ಹಣ್ಣು ಸೇವಿಸುತ್ತಿದ್ದರು. ಸರಿಯಾಗಿ 10 ಗಂಟೆಗೆ ವಿಶ್ರಾಂತಿಗೆ ತೆರಳುತ್ತಿದ್ದರು. ಆಗ ಅವರು ತಮ್ಮ ನಿಜಸ್ವರೂಪದಲ್ಲಿಯೇ ನೆಲೆಯಾಗಿ ನಿಲ್ಲುತ್ತಿದ್ದರು. ಅವರ ದಿನಚಯರ್ೆಯ ಕ್ರಮದಲ್ಲಿ ಒಂದು ದಿನವಾದರೂ ವ್ಯತ್ಯಾಸವಾಗಿದ್ದನ್ನು ನಾವು ಕಾಣಲಿಲ್ಲ.
ಅವರದು ಸಂತೃಪ್ತಿಯಿಂದ ಕೂಡಿದ ಜೀವನ. ಯಾವತ್ತೂ ಧನ ಕನಕ ಸಂಪತ್ತು ಭೂಮಿ ಅಧಿಕಾರ ಐಶ್ವರ್ಯಕ್ಕೆ ಆಸೆ ಪಡಲಿಲ್ಲ. ತಮ್ಮದೇ ಜಮೀನಿನಲ್ಲಿ ಇತರರು ಬೆಳೆದು ತಮಗೆ ಒಪ್ಪಿಸಿದ್ದಕ್ಕೆ ತೃಪ್ತಿ ಪಡುವವರಾಗಿದ್ದರು. ತಮಗೆ ದೊರಕಿದುದರಲ್ಲಿಯೇ ಕೆಲವು ಭಾಗವನ್ನು ಬಡವರಿಗೆ, ರೋಗಿಗಳಿಗೆ ಮತ್ತು ಅಂಗವಿಕಲರಿಗೆ ದಾನ ಮಾಡುತ್ತಿದ್ದರು. ತಮ್ಮ ಜೀವಿತದುದ್ದಕ್ಕೂ ಅವರು ಯಾರಿಂದಾಗಲಿ ಒಂದು ಪೈಸೆಯನ್ನು ಸಹ ಸ್ವೀಕರಿಸಲಿಲ್ಲ. ಭಕ್ತರಿಂದಾಗಲಿ ಅಥವಾ ಬೇರೆ ಯಾರಿಂದಾಗಲಿ ನಮಸ್ಕಾರಾದಿಗಳನ್ನಾಗಲಿ, ಮಾನ-ಮಯರ್ಾದೆಗಳನ್ನಾಗಲಿ ಅವರು ಬಯಸಿದ್ದನ್ನು ನಾವು ಕಾಣಲಿಲ್ಲ. ಪೂಜ್ಯ ಶ್ರೀ ಗುರುದೇವ ಆತ್ಮಾನಂದರು ಆತ್ಮನಿಷ್ಠರಿದ್ದದ್ದರಿಂದ ಅವರ ಪಾದದಡಿಯಲ್ಲಿ ಅಣಿಮಾದಿ ಸಿದ್ಧಿಗಳು ಉರುಳಾಡುತ್ತಿದ್ದವು. ಅವರ ಪ್ರವಚನದಿಂದ ಶಾಂತಿ ಪಡೆದವರು, ಅವರ ದರ್ಶನ-ಸ್ಪರ್ಶನ-ಆಶೀವರ್ಾದದಿಂದ ರೋಗಗಳಿಂದ ಮುಕ್ತರಾದವರು ಮತ್ತು ಅವರ ಸನ್ನಿಧಿ ಮಾತ್ರದಿಂದ ರಾಕ್ಷಸ ಪಿಶಾಚಿಗಳ ಭಯಂಕರ ಪೀಡೆಯಿಂದ ಮುಕ್ತರಾದವರು ಅಸಂಖ್ಯರು. ಪೂಜ್ಯ ಶ್ರೀ ಗುರುದೇವ ಆತ್ಮಾನಂದರು 1983 ಡಿಸೆಂಬರ್ 19ರಂದು ಲೌಕಿಕ ದೇಹವನ್ನು ತ್ಯಾಗಮಾಡಿ ಭಾವರಹಿತ ಪರಮಾತ್ಮರಾದರು.
ಅವರು ಜೀವಿತದುದ್ದಕ್ಕೂ ಪ್ರತಿದಿನ ಮೂರ್ನಾಲ್ಕು ತಾಸುಗಳ ಕಾಲ ತೂಯರ್ಾವಸ್ಥೆಯನ್ನು ಹೊಂದಿಯೇ ತೀರುತ್ತಿದ್ದರು. 1983 ಡಿಸೆಂಬರ್ 19ರಂದು ಸಹ ಮುಂಜಾನೆ 8 ಗಂಟೆಯಿಂದ 11 ಗಂಟೆಯವರೆಗೆ ಸ್ವರೂಪದ ಅನುಷ್ಠಾನದಲ್ಲಿ ನಿರತರಾಗಿದ್ದರು.
ಅವರು ಎರಡು ಮಂತ್ರಗಳನ್ನು ಬೋಧಿಸಿದರು. ಅವು, "ಓಂ ನಮಃ ಸುಖಾಯ" ಮತ್ತು "ಓಂ ನಮೋ ನಾನವೆ". "ಓಂ ನಮಃ ಸುಖಾಯ" ಮಂತ್ರವು, ಎಲ್ಲ ಜೀವಿಗಳಿಗೆ ಬೇಕಾದ ಶಾಶ್ವತ ಸುಖವು ನಿರಾಕಾರವಿದೆ ಎಂದು ಬೋಧಿಸುವದು. ಆದರೆ ಅಜ್ಞಾನಿ ಜೀವರು ದಃಖಮಯವಾದ ಸಾಕಾರ ವಸ್ತುಗಳಲ್ಲಿಯೇ ಸುಖವನ್ನು ಹುಡುಕುವರು ಮತ್ತು ಅವುಗಳಿಗಾಗಿ ಜಗಳಾಡುವರು. "ಓಂ ನಮೋ ನಾನವೆ" ಮಂತ್ರವು, ನಮ್ಮ ನಿಜ ಸ್ವರೂಪವೇ ಆನಂದ ಇರುವದು ಎಂದು ಬೋಧಿಸುವದು. ಆದರೆ ಅಜ್ಞಾನಿ ಜೀವರು ಆನಂದವನ್ನು ತಮ್ಮ ಸ್ವರೂಪದ ಹೊರಗೆ ಹುಡುಕುವರು. ಆದ್ದರಿಂದ ನಾವು ಶಾಶ್ವತ ಸುಖವನ್ನು ಹೊಂದಬೇಕಾದರೆ ನಮ್ಮ ಸ್ವರೂಪಜ್ಞಾನವನ್ನು ಮಾಡಿಕೊಳ್ಳಬೇಕು.

"ಅವರು ತಾವು ಬೋಧಿಸಿದಂತೆ ಜೀವಿಸಿದರು"